ಪದೇ ಪದೇ ನೆನಪಾದೆ
ಹೀಗೆಯೇ ಮತ್ತೊಂದು ವರ್ಷ ಸಂದಿದೆ
ನಿನ್ನ ನೆನಪು ಮರುಕಳಿಸಿ ಬಂದಿದೆ
ಹೇಗೆ ಕಳೆದೆವೊ ನೀನಿರದ ಹಗಲುಗಳ ,
ನಿದ್ದೆ ಬಾರದ ನೀರಸ ಇರುಳುಗಳ
ಅಚ್ಚಳಿಯದೆ ನಿಂತಿರುವೆ ಸಹೃದಯರ ಮನದಲ್ಲಿ
ನಿಚ್ಚಳ ಪ್ರೀತ್ಯಾದರಗಳ ಸುಂದರ ಹೂಬನದಲ್ಲಿ .
ಘಟಿಸದಿದ್ದರೆ ಚೆನ್ನಿತ್ತು ಈ ದುಃಸ್ವಪ್ನ
ಆಗಿ ಹೋದವು ಕನಸುಗಳೆಲ್ಲ ಭಗ್ನ
ಗಳಿಸಲಾರೆವು ನಾವು ನಿನ್ನಂತೆ ಜನಾನುರಾಗ
ಮುಗಿಯದು ಎಂದಿಗೂ ಸಂತಾಪ, ವಿಯೋಗ
ಬದುಕುತಿರುವೆವು ಇಲ್ಲದೆ ನಮಗೆ ಗತ್ಯಂತರ
ತಿಳಿದಿದೆ ನಮಗೆ ಶೋಕವಿದು ನಿರಂತರ
ಕಳೆಯಿತು ಕಷ್ಟದಿಂದ ವರ್ಷಗಳು ಇಪ್ಪತ್ತೆರಡು
ಕೊನರದು ಬತ್ತಿದಾ ಭಾವಗಳ ಕೊರಡು .
--- ತಾರಾ ಶೈಲೇಂದ್ರ
No comments:
Post a Comment