ರಾಜಿ
ನಗರದ ಗೌಜು ಗದ್ದಲದಿಂದ, ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯದಿಂದ ಹೊರತಾದ ನಮ್ಮ ಸುಂದರ ಬಡಾವಣೆಯಲ್ಲಿ ಒಂದು ಕೆರೆ ಸಹ ಇದ್ದು ಆಕರ್ಷಣೆಯ ಕೇಂದ್ರಬಿಂದುವಾಗಿದೆ . ಬೀದಿಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಮರಗಳಲ್ಲಿ ಕೆಲವು ಕದಂಬ ವೃಕ್ಷ ಗಳೂ ಇದ್ದು, ಅವುಗಳ ಎಲೆ, ಹೂವು, ಕಾಯಿ, ಹಣ್ಣು ಬೀದಿಯಲ್ಲಿ ಬಿದ್ದು, ಓಡಾಡುವವರ ಕಾಲಡಿ ಸಿಕ್ಕಿ , ಅಪ್ಪಚ್ಚಿಯಾಗಿ ನಮ್ಮ ಪಾದರಕ್ಷೆಗಳಿಗೂ ಅಂಟಿ, ಮನೆಯ ಕಾಂಪೌಂಡು ಗಲೀಜಾಗಿ ಅದನ್ನೆಲ್ಲ ತೊಳೆಯುವುದೇ ರೇಜಿಗೆ ಕೆಲಸ . ಇತ್ತೀಚಿಗೆ ಮನೆ ಕಟ್ಟಿ, ಬಣ್ಣ ಬಳಿಸಿದ್ದ ನಮಗೆ ಚಿತ್ರ ವಿಚಿತ್ರ ಚಿತ್ತಾರ ಕಂಡಾಗ ಹೇಗಾಗಿರಬೇಡ? ರಾತ್ರಿಯ ಹೊತ್ತು ಬಾವಲಿಗಳು ಕದಂಬ ಮರದ ಹಣ್ಣುಗಳನ್ನು ಹೊತ್ತೊಯ್ಯುವಾಗಲೋ ಏನೋ ಗೋಡೆಗಳಿಗೆಲ್ಲ ಅಪ್ಪಳಿಸಿ ಬಿಡಿಸಿದ್ದ ಚಿತ್ತಾರಗಳವು .
ಹೀಗಿರುವಾಗೊಂದು ದಿನ ಬೀದಿ ಕಸ ಗುಡಿಸಲು ಬರುವ 'ರಾಜಿ' ಯೊಂದಿಗೆ ನನ್ನ ವಾದ ಶುರುವಾಯ್ತು . "ನೀನು ಪ್ರತಿ ದಿನ ಕಸ ತೊಗೊಂಡು ಹೋದರೆ ನಮಗೆ ಈ ಕಷ್ಟ ಇರೋದೇ ಇಲ್ಲ " ಅಂತ ನಾನು. ಅವಳು "ಇಲ್ಲ ಅಕ್ಕಾ ನಾನೂ ಎಷ್ಟು ಅಂತ ಕಸ ತೆಗೆದು ಹಾಕಲಿ ? ನೀವು ಆ ವಾರ್ಡ್ ಆಫೀಸಿಗೆ ಹೋಗಿ ಹೇಳಿ ಮರ ಕಡಿಸಿ " ಅಂದಳು . ಅಷ್ಟರಲ್ಲಿ ಅಕ್ಕ ಪಕ್ಕದ ಮನೆಯವರೂ ಹೊರಗೆ ಬಂದು ತಲಾ ಒಂದೊಂದು ಡೈಲಾಗ್ ಹೊಡೆದು ಹೋದರು - "ನೀನು ತಿಂಗಳ ಮೊದಲನೆಯ ದಿನ ದುಡ್ಡು ತೊಗೊಂಡು ಹೋಗೋಕಷ್ಟೇ ಬರ್ತೀಯ ", "ಪಾಲಿಕೆಯವರು ಸಂಬಳ ಕೊಡಲ್ವ? ಅದರ ಜೊತೆ ನಮ್ಮಿಂದಲೂ ತೊಗೊತೀಯ?", "ಬೆಳಿಗ್ಗೆ ಅದ್ಯಾರದೊ ಮನೆಯಲ್ಲಿ ಕೆಲಸಕ್ಕೆ ಹೋಗ್ತೇಯ. ಅದಕ್ಕೆ, ಇಲ್ಲಿ ಕಸ ತೆಗೆಯೋಕೆ ಬರಲ್ಲ" ಇತ್ಯಾದಿ, ಇತ್ಯಾದಿ . ಅಷ್ಟರಲ್ಲಿ ಇನ್ನೊಂದು ಮನೆಯ ಅಜ್ಜಿ ಹೊರಗೆ ಬಂದು, "ನಿನಗೆ ತಿಂಗಳಿಗೆ ದುಡ್ಡು ಕೊಡೋದೂ ಅಲ್ಲದೆ, ನಿನಗೆ ಊಟ, ತಿಂಡಿ ಬೇರೆ ಕೊಡೋದು ನಾವು . ನೀನು ನೋಡಿದರೆ ಗುಡಿಸು ಅಂದ್ರೆ ಪೊರಕೆನೂ ನೀವೇ ಕೊಡಿ ಅಂತೀಯ " ಅನ್ನೋದಾ?
ಅಲ್ಲಿಂದ ಇಬ್ಬರ ನಡುವಿನಮಾತಿನ ಚಕಮಕಿಗೆ ಸಾಕ್ಷಿಯಾಗಿದ್ದು ಧನುರ್ಮಾಸದ ಕೊರೆಯುವ ಚಳಿ, ನಾನು ಹಾಗು ನನ್ನ ಕೈಲಿದ್ದ ನಮ್ಮ ಮನೆಯ ಕಸದ ಬುಟ್ಟಿ ಅಷ್ಟೇ . ಕಡೆಗೆ ಅಜ್ಜಿ ವಟಗುಡುತ್ತಾ ಹೊರಟು ಹೋದರು. ರಾಜಿ ಜಗಳವಾಡಿ ಸಾಕಾಗಿ "ಅಕ್ಕಾ ಗಂಟಲು ಒಣಗಿದೆ . ನೀರು ಕೊಡಿ" ಅಂದಳು . ನೀರಿನ ಜೊತೆ ಒಂದು ಲೋಟ ಕಾಫಿನೂ ಕೊಟ್ಟೆ . ಪುನಃ ಶುರುವಾಯ್ತು ಇವಳ ಪ್ರವರ . "ಅಲ್ಲಾ, ನೀವೇ ಹೇಳಿ . ನೀವು ಎಷ್ಟು ದಿನ ನಂಗೆ ' ಕಾಫಿ ಕುಡೀತೀಯ?' ಅಂತ ಕೇಳಿಲ್ಲ ? ನಾನೇ ಎಷ್ಟೋ ಸಲ ಬೇಡ ಅಂದಿದ್ದೀನಿ . ಈ ಮುದುಕಿ ನನ್ನ ಕಸ ತುಂಬುವ ತಳ್ಳುಗಾಡಿಗೆ ಹಾಕೋಕೆ ಅಂತ ಇಟ್ಟಿರೋ ಹಳಸಲು ಅನ್ನವನ್ನು ಕೊಡುತ್ತೆ ನಂಗೆ ತಿನ್ನೋಕೆ. ನಾವು ಇವರ ಕಣ್ಣಿಗೆ ಮನುಷ್ಯರಂಗೆ ಕಾಣ್ಸಲ್ವ? ನನ್ನ ಹಣೇಬರಾ. ಗಂಡ ನೆಟ್ಟಗಿದ್ರೆ ನಾನ್ಯಾಕೆ ಈ ಕೆಲಸಕ್ಕೆ ಬರಬೇಕಿತ್ತು? ಇರೋ ೨ ಮಕ್ಕಳಾದರೂ ಮುಂದಕ್ಕೆ ಚೆನ್ನಾಗಿರಲಿ ಅಂತ ಓದಿಸ್ತಿದೀನಿ. ತಿಂಗಳಿಗೆ ಸರಿಯಾಗಿ ಆ ಕಂಟ್ರಾಕ್ಟರು ದುಡ್ಡು ಕೊಡಲ್ಲ . ನಮ್ಮ ಹೊಟ್ಟೆ ಪಾಡು ನಡೀಬೇಕಲ್ಲ . ಅದಕ್ಕೆ ಪಕ್ಕದ ಬೀದಿಯಲ್ಲಿ ಒಂದು ಮನೇಲಿ ಕಸ-ಮುಸುರೆ ಕೆಲಸ ಮಾಡ್ತೀನಿ . ಈ ಮುದುಕಿ ನೋಡಿದ್ರೆ ಎನೋ ನಂಗೆ ದಿನಾ ಬಿಸಿ ಬಿಸಿಯಾಗಿ ಊಟ-ತಿಂಡಿ ಕೊಡೋ ಥರ ಹೇಳುತ್ತೆ " ಅಂತ ಮೂಗೊರೆಸಿಕೊಂಡಳು. ನಾನೂ ಸುಮ್ಮನಿರದೆ "ಮತ್ಯಾಕೆ ಅವರು ಕೊಡೋದನ್ನ ತೊಗೊತೀಯ? ಅಷ್ಟೊಂದು ಸ್ವಾಭಿಮಾನ ಇರೋವ್ಳು ಬೇಡ ಅಂತ ಹೇಳಬೇಕಿತ್ತು " ಅಂದುಬಿಟ್ಟೆ . ಅದನ್ನು ಕೇಳಿ ಅವಳ ಧ್ವನಿ ತಾರಕಕ್ಕೇರಿತು . "ಯಾರಿಗೆ ಬೇಕು ಅವರ ಮನೆ ಅನ್ನ? ನಾಯಿನೂ ಮೂಸಲ್ಲ . ನಾನೇನು ಅವರು ಕೊಟ್ಟಿದ್ದನ್ನ ತಿಂತಿದ್ದೆ ಅಂದ್ಕೊಂಡಿದೀರಾ ? ಕಸದ ಗಾಡಿಗೆ ಹಾಕ್ತಿದ್ದೆ. ಅವರ ಎದುರಿಗೆ ಹಾಕಿದ್ರೆ ಬೇಜಾರಾಗುತ್ತೆ ಅಂತ ಎದುರಿಗೆ ಹಾಕ್ತಿರಲಿಲ್ಲ ಅಷ್ಟೇ " ಅಂದಳು . ನನಗೋ ಮುಜುಗರ . ಯಾಕಾದರೂ ಇವಳ ಜೊತೆ ಬೆಳಿಗ್ಗೆನೇ ಮಾತಿಗೆ ನಿಂತೆ ಅಂತ . ಅಂತೂ ಅವಳನ್ನ ಸಾಗ ಹಾಕಿ ಒಳಗೆ ಬಂದೆ. ನನ್ನ ಪತಿ ದೇವರಿಗೆ ಗಂಗಾವತಿ ಪ್ರಾಣೇಶ್ ಹೇಳುತ್ತಿದ್ದ "ಹೆಂಗಸರೆಲ್ಲ ಬರೀ ಮಾತೇ" ಜೋಕ್ ನೆನಪಾಗಿ "ಅದೆಷ್ಟು ಮಾತಾಡ್ತೀರಿ ನೀವು ಹೆಂಗಸರು?" ಅಂತ ರೇಗಿಸಿದ್ರು.
ನಾನು ಆ ಘಟನೆಯನ್ನು ಮರೆತಂತಾಗಿತ್ತು. ಆದರೆ ಹಳೇ ಗಾಯ ಪದೇ ಪದೇ ಕಾಡುವಂತೆ ಇವತ್ತು ಬೆಳಿಗ್ಗೆ ಅದೇ ರಾಜಿ ಬಂದು ನೀರು ಕೇಳಿದಳು . ನಾನು ಲೋಟದಲ್ಲಿ ನೀರು ಕೊಟ್ಟೆ . ಅವಳು "ಅಕ್ಕಾ ಒಂದು ಚೊಂಬಿನಲ್ಲಿ ಕೊಡಿ ನೀರು. ಯಾಕೋ ತುಂಬಾ ಬಾಯಾರಿಕೆ" ಅಂದಳು . ನಾನು ನೀರು ತೊಗೊಂಡು ಹೊರಗೆ ಹೋಗೋದಕ್ಕೂ , ಜಗಳ ಆಡಿದ ಅಜ್ಜಿ ಕೈಯಲ್ಲಿ ಒಂದು ಪ್ಲಾಸ್ಟಿಕ್ ಚೀಲದ ಒಂದು ತುಂಡಿನ ಮೇಲೆ ಇಡ್ಲಿ, ಚಟ್ನಿ ತಂದು ರಾಜಿಯನ್ನು ಕರೆಯೋದಕ್ಕೂ ಸರಿ ಹೋಯ್ತು .
ರಾಜಿ ನೀರು ಕುಡಿದು ಸರ ಸರ ಹೋದಳು . ನಾನು "ಪರವಾಗಿಲ್ಲ , ಇಬ್ಬರಿಗೂ ' ರಾಜಿ ' ಆಗಿದೆ " ಅಂದುಕೊಂಡೆ . ಅಜ್ಜಿ ಕರೆದರು ಅಂತ ಹತ್ತಿರ ಹೋದ ರಾಜಿ ಕೈ ಚಾಚಿದಳು . ನಾನು ಮನಸ್ಸಿನಲ್ಲೇ "ಆ ಅಜ್ಜಿ ಅಷ್ಟೆಲ್ಲ ಮಾತಾಡಿದ್ರೂ, ಅವರು ಕರೆದ ಕೂಡಲೇ ಓಡಿ ಹೋಗ್ತಾಳಲ್ಲ ಇವಳು . ಸ್ವಲ್ಪವೂ ಸ್ವಾಭಿಮಾನ ಇಲ್ಲ ಇವಳಿಗೆ " ಅಂದುಕೊಳ್ಳುತ್ತಾ ಇರುವಾಗಲೇ , ಬೀದಿಯ ಮೇಲೆ ಏನೋ ಬಿದ್ದ ಸದ್ದಾಯ್ತು . ನೋಡಿದರೆ ಆ ಅಜ್ಜಿ ಇವಳ ಕೈಗೆ ಪ್ಲಾಸ್ಟಿಕ್ ತುಂಡು ಬೀಳುವಂತೆ ಎಸೆದಂತೆ ಮಾಡಿದ್ದಾರೆ . ರಾಜಿ ಸಿಟ್ಟಿಂದ ಕೈ ಹಿಂತೆಗೆದುಕೊಂಡಿದ್ದಾಳೆ. ಹಾಗಾಗಿ ಇಡ್ಲಿ, ಚಟ್ನಿ ಬೀದಿ ಪಾಲಾಗಿತ್ತು .
ಅಜ್ಜಿ "ಕೆಳಗೆ ಬೀಳಿಸಿ ಬಿಟ್ಯಾ? ತೆಗೆದು ಹಾಕು . ಅನ್ನ ಅನ್ನಪೂರ್ಣೆ ಗೊತ್ತಾ? ಮಕ್ಕಳು ತುಳಿದಾವು" ಅಂದರು . ಅದಕ್ಕೆ ರಾಜಿಯಾಗದ 'ರಾಜಿ' "ಬೇಕಿದ್ರೆ ನೀವೇ ತೆಗೆದು ಹಾಕಿ . ಇನ್ನು ಮೇಲೆ ಕಸದ ಬುಟ್ಟಿಯನ್ನು ಗಾಡಿ ಹತ್ರ ತಂದು ಕೊಟ್ರೆ ಮಾತ್ರ ಕಸ ತೊಗೊಂಡು ಹೋಗ್ತೀನಿ. ಇಲ್ಲದಿದ್ರೆ ಇಲ್ಲ " ಅಂತ ಖಡಾಖಂಡಿತವಾಗಿ ಹೇಳಿ ಗಾಡಿ ತಳ್ಳಿಕೊಂಡು ಹೋಗೇ ಬಿಟ್ಟಳು . ಅಜ್ಜಿ ಬೆರಗಾಗಿ ನೋಡುತ್ತಲೇ ನಿಂತಿದ್ದರು .
- ತಾರಾ ಶೈಲೇಂದ್ರ

Wow you are really greatest writer
ReplyDeleteRaaji ya prathiyondhu saalu
Kannamundhe nadedha
Sathya ghatane yembhanthe
Barediruviri
Nijakku nimma baravanige
Advithiya
Amogha
Dhanyavaada Vasanth.
Deleteneejavaagalu neevu tumbaane great kanriiiiiiiiiiii...........
DeleteGreat enu illa kanri. Bareyuva prayatna ashte
Delete