Wednesday, March 19, 2014

ಬಿನ್ನಹ(poem - save girl child)







                        ಬಿನ್ನಹ

ಅಮ್ಮಾ ಬೆಚ್ಚಗಿರುವೆ ನಾ ನಿನ್ನುದರದಲಿ
ಕಾಯುತ್ತಿರುವೆ ಬರಲು ಈ ಧರೆಯಲಿ
ಎಷ್ಟೋ ಕನಸುಗಳಿವೆ ನಿನ್ನಂತೆ ನನಗೂ
ನೋಡಬೇಕಿದೆ ನಾ ಭುವಿಯ ಸೊಬಗು
ಅಣ್ಣನಂತೆ ನನಗೂ ಓದುವ ಆಸೆ
"ಹೆಣ್ಣು"  ಆದರೇನು? ಆಗಸದಿ ಹಾರುವಾಸೆ
ನಿನ್ನಂತೆ ಆಗುವೆ ನಾನೂ ಜಾಣೆ
ಕಾಡುವುದಿಲ್ಲ ನಿನ್ನ ನನ್ನಾಣೆ
ಅಪ್ಪನಂತೆ ಗಳಿಸುವೆ ಸಮಾಜದಿ ಹೆಸರು
ನಾನಾಗುವೆ ನಿಮ್ಮೆಲ್ಲರ ಉಸಿರು
ನಿಮ್ಮ ಮುಪ್ಪಿನಲಿ ನಾನೇ ಊರುಗೋಲು
ಅನುಭವಿಸಲು ಬಿಡೆ ಯಾವುದೇ ಸೋಲು
ಆದರೆ......
ಇವೆಲ್ಲ ನನಸಾಗಬಹುದೇ ಅಮ್ಮಾ?
ನೀಡುವೆಯಾನೇನು ನನಗೆ ಜನ್ಮ ?
ಆ ದೇವರಲ್ಲಿ ನನ್ನ ಬಿನ್ನಹ
ಅನುಗಾಲ ನಾನಿರಬೇಕು ನಿನ್ನ ಸನಿಹ
ನೀಡದಿರಲಿ ನನಗೆ ಅಕಾಲ ಮರಣ
ಭೂಮಿಗೆ ಬರಲು ನನಗಿದೆ ಸಕಾರಣ

- ತಾರಾ ಶೈಲೇಂದ್ರ
http://taraantaranga.blogspot.in

                     

 

No comments:

Post a Comment