ಸುಮ್ಮನೆ ಹೀಗೆ
ಬಂದವನಲ್ಲವೇ ನೀನು ?
ತಟ್ಟಿದ್ದೇಕೆ ಮನದ ಕದವ ?
ಬಯಸಿದ್ದೇಕೆ ನನ್ನ ಹಿತವ ?
ತೋರಿದ್ದೇಕೆ ಅಂತಃಕರಣ ?
ಬರೆದಿದ್ದೇಕೆ ಸ್ನೇಹದ ಭಾಷ್ಯ ?
ಮಗುವಿನಂತೆ ಆ ನಿನ್ನ ನಗು
ನಗುವಂತೆ ಮಾಡುವುದು ನನಗು ,
ಸಣ್ಣ ಪುಟ್ಟದ್ದಕ್ಕೆ ಜಗಳ, ರಂಪ
ನನ್ನೆಲ್ಲ ಕಾಟ, ಹುಡುಗಾಟ
ಸಹಿಸುವ ನೀನೆ ಭೂಪ .
ಇರಬಲ್ಲೆನೆ ನಾ
ನಿನ್ನ ಬಿಟ್ಟು?
ಆ ಯೋಚನೆಯೇ
ತರಿಸುತ್ತದೆ ನನಗೆ ಸಿಟ್ಟು .
ಆದರೆ ಸಮಾಜದ ಕಟ್ಟುಪಾಡು?
ಜನ ಹಾಡಿದರೆ ಸಂಶಯದ ಹಾಡು?
ನನ್ನ ಅಂತರ್ಮುಖಿ ಮನದ
ಪರಿಧಿ ದಾಟಿದ ನೀನ್ಯಾರು?
ಹಿತೈಷಿಯೊ, ಬಾಲ್ಯಸಖನೊ
ಅಥವಾ ಭಾವಾನುಬಂಧಗಳಿಂದ ವಿಮುಖನೋ?
ಉತ್ತರಕ್ಕಾಗಿ ಹುಡುಕಿದೆ, ಬೆದಕಿದೆ .
ಆಗ ನನಗನಿಸಿದ್ದು
ಎಲ್ಲ ಸಂಬಂಧಗಳಿಗೆ
ಹೆಸರು ಕೊಟ್ಟರೆ ಸಾಕೆ?
ನಿಸ್ವಾರ್ಥ ಸ್ನೇಹಕ್ಕಿಂತಲೂ
ಅನುಬಂಧ ಬೇಕೆ?
- ತಾರಾ ಶೈಲೇಂದ್ರ
ಅದ್ಭುತವಾದ ಕವಿತೆ, ಹೇಳಲಾಗದ ತಳಮಳ..
ReplyDeleteDhanyavaadagalu Aravind
DeleteYella sambhanda galige hesaru kottare saake
ReplyDeleteNisswartha snehakintalu hesaru bekaa ??
This comment has been removed by the author.
ReplyDelete